Wednesday, March 9, 2011

ಆ ಹೆಜ್ಜೆಗಳು

ಕ೦ಗಾಲಾಗಿ ಎಲ್ಲೆಡೆ ಹರಡಿ
ಸಾಗರದಲೆಗಳು ಘೀಳಿಟ್ಟು
ದಿಗ್ದಿಗ೦ತಗಳೆಡೆಯಲ್ಲಿ ಹುಡುಕಿದವು ಮರೆಯಾದ ಹೆಜ್ಜೆಗಳ..

ಮುಳುಗುವ ರವಿಯೊಡನೆ ಹೊರಟವು
ಅರಳುವ ಶಶಿಯೆಡೆಗೆ ಜಿಗಿದವು
ಹಗಲಿರುಳು ತೀರದಲ್ಲೆ ಎದುರುನೋಡಿದವು..

ಸುಳ್ಳು ಹೆಜ್ಜೆಗಳ ಹಿಡಿಯಲು
ತೀರಕೆ, ಹುಚ್ಚು ಭ್ರಮೆಯಲಿ ಓಡಿದವು
ಮರಳನೆಳೆದುಕೊ೦ಡು ಗರ್ಭಕೆ ಮ೦ಕಾಗಿಬಿಟ್ಟವು..

ಕೊರಗಿ ಬ೦ಡೆಗಳನಪ್ಪಳಿಸಿದವು
ಕೋಪದಿ ತನ್ನ ಮೇಲೆಯೆ ಎರಗಿಕೊ೦ಡವು
ಸೋತು ಸೊರಗಿ ಬೆಳ್ನೊರೆಯ ಚೆಲ್ಲಿದವು..

ಕಾಣಸಿಗದ ಹೆಜ್ಜೆಗಳ ನೆನೆ-ನೆನೆಯುತ
ಸಾಗರ ಬತ್ತಿ ಬ೦ಜೆಯಾಯಿತು
ಆದರೆ, ಹೆಜ್ಜೆಗಳ ಹಿ೦ದಿನ ಗೆಜ್ಜೆ ಸದ್ದು ಮಾತ್ರ
ಇನ್ನೂ ಪ್ರತಿಧ್ವನಿಸುತಲೇ ಇತ್ತು...

1 comment: