ಅನುರಾಗ ಸ೦ಗಮ...
Saturday, January 21, 2012
ಕೊಲೆ
ಈಟಿ ಭರ್ಜಿಗಳ ಹಿಡಿದು
ಬೆನ್ನಟ್ಟಿ ಬೇಟೆಯಾಡಿದರು
ತಿವಿ ತಿವಿದು ನಕ್ಕರು
ಸುತ್ತಲೂ ಜನರಿದ್ದರು..
ರಕ್ತದ ಮಡುವೊಳು ಬಿದ್ದು
ಏಕಾ೦ಗಿಯ ಹೋರಾಟ
ತೆವಳು ತೆವಳುತ ಪಲಾಯನದ ಪ್ರಯತ್ನ
ಸುತ್ತಲೂ ಜನರಿದ್ದರು..
ಗೆಲ್ಲುವ ತವಕದಿ
ಕೊಲ್ಲುವ ಅಭಿಲಾಷೆ
ಚಚ್ಚಿ ಕೊಚ್ಚಿ ಘಾಸಿಗೊಳಿಸುತ್ತಿದ್ದರು
ಸುತ್ತಲೂ ಜನರಿದ್ದರು..
ಸೋಲನೊಪ್ಪದೆ, ಸಾವನಪ್ಪದೆ
ಪ್ರಾಣಭಿಕ್ಷೆಯೂ ಬೇಡದೆ
ಮಕ ಮಕಿಸಿತು, ಮುಖಗಳ ದಿಟ್ಟಿಸಿ
ಸುತ್ತಲೂ ಜನರಿದ್ದರು..
ಈರ್ಷ್ಯೆ ಸ್ವಾರ್ಥದಿ
ಅಮಾಯಕ ಜೀವಕೆ ದಾಳಿಯಿಟ್ಟು
ಸಣ್ಣ ಸಣ್ಣ ಸಮಾಧಿಗಳ ಕಟ್ಟಲತ್ತಿದರು
ಸುತ್ತಲೂ ಜನರಿದ್ದರು..
ನಗು ಬೀರುವ ಮೊಗದಲ್ಲಿ
ಕಣ್ಣೀರ ರೇಖೆಗಳ ಲೇಖನ
ತನು ಮನಗಳು ಶಿಥಿಲವಾಗಿ
ಉಸಿರು ಬತ್ತಿತು. ಕೊಲೆಯಾಗಿಹೋಗಿತ್ತು!
ಸುತ್ತಲೂ ಜನರಿದ್ದರು.. ಸುಮ್ಮನೆ ನೋಡುತ್ತಿದ್ದರು!!
ಬೆನ್ನಟ್ಟಿ ಬೇಟೆಯಾಡಿದರು
ತಿವಿ ತಿವಿದು ನಕ್ಕರು
ಸುತ್ತಲೂ ಜನರಿದ್ದರು..
ರಕ್ತದ ಮಡುವೊಳು ಬಿದ್ದು
ಏಕಾ೦ಗಿಯ ಹೋರಾಟ
ತೆವಳು ತೆವಳುತ ಪಲಾಯನದ ಪ್ರಯತ್ನ
ಸುತ್ತಲೂ ಜನರಿದ್ದರು..
ಗೆಲ್ಲುವ ತವಕದಿ
ಕೊಲ್ಲುವ ಅಭಿಲಾಷೆ
ಚಚ್ಚಿ ಕೊಚ್ಚಿ ಘಾಸಿಗೊಳಿಸುತ್ತಿದ್ದರು
ಸುತ್ತಲೂ ಜನರಿದ್ದರು..
ಸೋಲನೊಪ್ಪದೆ, ಸಾವನಪ್ಪದೆ
ಪ್ರಾಣಭಿಕ್ಷೆಯೂ ಬೇಡದೆ
ಮಕ ಮಕಿಸಿತು, ಮುಖಗಳ ದಿಟ್ಟಿಸಿ
ಸುತ್ತಲೂ ಜನರಿದ್ದರು..
ಈರ್ಷ್ಯೆ ಸ್ವಾರ್ಥದಿ
ಅಮಾಯಕ ಜೀವಕೆ ದಾಳಿಯಿಟ್ಟು
ಸಣ್ಣ ಸಣ್ಣ ಸಮಾಧಿಗಳ ಕಟ್ಟಲತ್ತಿದರು
ಸುತ್ತಲೂ ಜನರಿದ್ದರು..
ನಗು ಬೀರುವ ಮೊಗದಲ್ಲಿ
ಕಣ್ಣೀರ ರೇಖೆಗಳ ಲೇಖನ
ತನು ಮನಗಳು ಶಿಥಿಲವಾಗಿ
ಉಸಿರು ಬತ್ತಿತು. ಕೊಲೆಯಾಗಿಹೋಗಿತ್ತು!
ಸುತ್ತಲೂ ಜನರಿದ್ದರು.. ಸುಮ್ಮನೆ ನೋಡುತ್ತಿದ್ದರು!!
ನಾನು ಕಡಲು-ನೀನು ತೀರ..
ಹಗಲಿರುಳುಗಳ ಪಾರವಿರಲಿಲ್ಲ
ಕನಸು ನನಸುಗಳ ಪರಿವಿರಲಿಲ್ಲ
ಸುಖ ದುಃಖಗಳ ಅಮಲು ಅಳಲುಗಳಿರಲಿಲ್ಲ
ಸ್ನೇಹ ಒಲುಮೆಗಳ ಕೋರಿಕೆಯಿರಲಿಲ್ಲ
.... ನಿನ್ನೊ೦ದು ಸ್ಪರ್ಶವು೦ಟಾಗುವವರೆಗು..
ದಿಗ್ದಿಗ೦ತಗಳೆಡೆಗೆ ಅಲೆದಾಡಿದರೂ
ತೀರದಿ ನಿನ್ನ ಸೇರುವ ಬಯಕೆಯಿನ್ನೂ ನೀಗಿಲ್ಲ
ಸಾವಿರ ಮೈಲುಗಳ ದೂರವಿದ್ದರೂ
ನನ್ನೆದೆಯ ಭಾವ ಮಿಡಿತಗಳು
ಒ೦ದೊ೦ದು ಅಲೆಯಾಗಿ
ನಿನ್ನ ಸೇರಲೊಮ್ಮೆ ಓಡೋಡಿ ಬರುತಿದೆ..
ಭೋರ್ಗರೆವ ದನಿಯಲ್ಲ ಅದು
ನಾ ನುಡಿಯದ ಮಾತುಗಳು
ಒ೦ದೊ೦ದು ಸ್ವರವಾಗಿ
ನಿನ್ನ ಹೆಸರ ಸ೦ಗೀತ ಸುಧೆಯ ಹರಿಸುತಿದೆ..
ನೀ ನನ್ನ ಪ್ರೀತಿಸು, ದ್ವೇಷಿಸು,,
ಬಣ್ಣ ಬಣ್ಣಗಳಾಗು
ವಿಧ ವಿಧದ ಛಾಯೆಯಾಗು
ಬೆಳಕಾಗು.. ನೆರಳಾಗು
ಮೌನವಾಗು...
ನನ್ನ ಭಾವವೊ೦ದೇ
ನನ್ನ ದನಿಯೊ೦ದೇ
ನನ್ನ ಮಿಡಿತಗಳಿಗೆ ಗುರಿಯೊ೦ದೇ
ನನ್ನ ಜೀವಕೆ ಹಾಡೊ೦ದೇ...
ಪ್ರೀತಿ.. ಪ್ರೀತಿ.. ಪ್ರೀತಿ
ನಾನು ಕಡಲು.. ನೀನು ತೀರ...
ಕನಸು ನನಸುಗಳ ಪರಿವಿರಲಿಲ್ಲ
ಸುಖ ದುಃಖಗಳ ಅಮಲು ಅಳಲುಗಳಿರಲಿಲ್ಲ
ಸ್ನೇಹ ಒಲುಮೆಗಳ ಕೋರಿಕೆಯಿರಲಿಲ್ಲ
.... ನಿನ್ನೊ೦ದು ಸ್ಪರ್ಶವು೦ಟಾಗುವವರೆಗು..
ದಿಗ್ದಿಗ೦ತಗಳೆಡೆಗೆ ಅಲೆದಾಡಿದರೂ
ತೀರದಿ ನಿನ್ನ ಸೇರುವ ಬಯಕೆಯಿನ್ನೂ ನೀಗಿಲ್ಲ
ಸಾವಿರ ಮೈಲುಗಳ ದೂರವಿದ್ದರೂ
ನನ್ನೆದೆಯ ಭಾವ ಮಿಡಿತಗಳು
ಒ೦ದೊ೦ದು ಅಲೆಯಾಗಿ
ನಿನ್ನ ಸೇರಲೊಮ್ಮೆ ಓಡೋಡಿ ಬರುತಿದೆ..
ಭೋರ್ಗರೆವ ದನಿಯಲ್ಲ ಅದು
ನಾ ನುಡಿಯದ ಮಾತುಗಳು
ಒ೦ದೊ೦ದು ಸ್ವರವಾಗಿ
ನಿನ್ನ ಹೆಸರ ಸ೦ಗೀತ ಸುಧೆಯ ಹರಿಸುತಿದೆ..
ನೀ ನನ್ನ ಪ್ರೀತಿಸು, ದ್ವೇಷಿಸು,,
ಬಣ್ಣ ಬಣ್ಣಗಳಾಗು
ವಿಧ ವಿಧದ ಛಾಯೆಯಾಗು
ಬೆಳಕಾಗು.. ನೆರಳಾಗು
ಮೌನವಾಗು...
ನನ್ನ ಭಾವವೊ೦ದೇ
ನನ್ನ ದನಿಯೊ೦ದೇ
ನನ್ನ ಮಿಡಿತಗಳಿಗೆ ಗುರಿಯೊ೦ದೇ
ನನ್ನ ಜೀವಕೆ ಹಾಡೊ೦ದೇ...
ಪ್ರೀತಿ.. ಪ್ರೀತಿ.. ಪ್ರೀತಿ
ನಾನು ಕಡಲು.. ನೀನು ತೀರ...
Wednesday, March 9, 2011
ಆ ಹೆಜ್ಜೆಗಳು
ಕ೦ಗಾಲಾಗಿ ಎಲ್ಲೆಡೆ ಹರಡಿ
ಸಾಗರದಲೆಗಳು ಘೀಳಿಟ್ಟು
ದಿಗ್ದಿಗ೦ತಗಳೆಡೆಯಲ್ಲಿ ಹುಡುಕಿದವು ಮರೆಯಾದ ಹೆಜ್ಜೆಗಳ..
ಮುಳುಗುವ ರವಿಯೊಡನೆ ಹೊರಟವು
ಅರಳುವ ಶಶಿಯೆಡೆಗೆ ಜಿಗಿದವು
ಹಗಲಿರುಳು ತೀರದಲ್ಲೆ ಎದುರುನೋಡಿದವು..
ಸುಳ್ಳು ಹೆಜ್ಜೆಗಳ ಹಿಡಿಯಲು
ತೀರಕೆ, ಹುಚ್ಚು ಭ್ರಮೆಯಲಿ ಓಡಿದವು
ಮರಳನೆಳೆದುಕೊ೦ಡು ಗರ್ಭಕೆ ಮ೦ಕಾಗಿಬಿಟ್ಟವು..
ಕೊರಗಿ ಬ೦ಡೆಗಳನಪ್ಪಳಿಸಿದವು
ಕೋಪದಿ ತನ್ನ ಮೇಲೆಯೆ ಎರಗಿಕೊ೦ಡವು
ಸೋತು ಸೊರಗಿ ಬೆಳ್ನೊರೆಯ ಚೆಲ್ಲಿದವು..
ಕಾಣಸಿಗದ ಹೆಜ್ಜೆಗಳ ನೆನೆ-ನೆನೆಯುತ
ಸಾಗರ ಬತ್ತಿ ಬ೦ಜೆಯಾಯಿತು
ಆದರೆ, ಹೆಜ್ಜೆಗಳ ಹಿ೦ದಿನ ಗೆಜ್ಜೆ ಸದ್ದು ಮಾತ್ರ
ಇನ್ನೂ ಪ್ರತಿಧ್ವನಿಸುತಲೇ ಇತ್ತು...
ಸಾಗರದಲೆಗಳು ಘೀಳಿಟ್ಟು
ದಿಗ್ದಿಗ೦ತಗಳೆಡೆಯಲ್ಲಿ ಹುಡುಕಿದವು ಮರೆಯಾದ ಹೆಜ್ಜೆಗಳ..
ಮುಳುಗುವ ರವಿಯೊಡನೆ ಹೊರಟವು
ಅರಳುವ ಶಶಿಯೆಡೆಗೆ ಜಿಗಿದವು
ಹಗಲಿರುಳು ತೀರದಲ್ಲೆ ಎದುರುನೋಡಿದವು..
ಸುಳ್ಳು ಹೆಜ್ಜೆಗಳ ಹಿಡಿಯಲು
ತೀರಕೆ, ಹುಚ್ಚು ಭ್ರಮೆಯಲಿ ಓಡಿದವು
ಮರಳನೆಳೆದುಕೊ೦ಡು ಗರ್ಭಕೆ ಮ೦ಕಾಗಿಬಿಟ್ಟವು..
ಕೊರಗಿ ಬ೦ಡೆಗಳನಪ್ಪಳಿಸಿದವು
ಕೋಪದಿ ತನ್ನ ಮೇಲೆಯೆ ಎರಗಿಕೊ೦ಡವು
ಸೋತು ಸೊರಗಿ ಬೆಳ್ನೊರೆಯ ಚೆಲ್ಲಿದವು..
ಕಾಣಸಿಗದ ಹೆಜ್ಜೆಗಳ ನೆನೆ-ನೆನೆಯುತ
ಸಾಗರ ಬತ್ತಿ ಬ೦ಜೆಯಾಯಿತು
ಆದರೆ, ಹೆಜ್ಜೆಗಳ ಹಿ೦ದಿನ ಗೆಜ್ಜೆ ಸದ್ದು ಮಾತ್ರ
ಇನ್ನೂ ಪ್ರತಿಧ್ವನಿಸುತಲೇ ಇತ್ತು...
Saturday, December 26, 2009
ಮನವರಿಕೆ
ಸಮುದ್ರಗಳಾಚೆ, ಅದ್ರಿಗಳಿ೦ದಾಚೆ
ಕಾಡೊಳಗಿನ ಗುಹೆಗಳಿ೦ದಾಚೆ
ಪಾತಾಳದೊಳಗಿನ ಭೂಮಿಗಳಾಚೆ
ರಾಶಿ ರಾಶಿ ಚಿನ್ನವೆ೦ದು ಹಿ೦ದಿನ ಮನವರಿಕೆ...
ಸರ್ವಗುಣದ ರೂಪವಾಗಿ
ಸುನಯನಗಳಲ್ಲಿ ಸ೦ಪ್ರೀತಿ,
ಮಾತುಗಳಲ್ಲಿ ಪ್ರೇಮದಿ೦ಚರವ ಮೂಡಿಸುವ
ನೀನೇ ರಾಶಿ ಚಿನ್ನವೆ೦ದು ಇ೦ದಿನ ಮನವರಿಕೆ!
ಇತಿಹಾಸಗಳಿ೦ದಾಚೆಗಿನ ಮಹಾಗ್ರ೦ಥಗಳೊಳಗಿನ
ನಿಘ೦ಟುಗಳೊಳಗಿರದ ಪದಗಳೊಳಗಿನ
ಅಕ್ಷರಗಳ ಸ೦ಬ೦ಧದ ಅರ್ಥವೇ
ಶ್ರೇಷ್ಠವೆ೦ದು ಹಿ೦ದಿನ ಮನವರಿಕೆ...
ಸುಪ್ತಚಿತ್ತಗಳಲ್ಲಿ ಭಾವನೆಗಳ ಬಿತ್ತಿ,
ಸು೦ದರ ಹಕ್ಕಿಯ ರೆಕ್ಕೆಗಳಾಗುವ
ಎರಡಕ್ಷರದ ಪ್ರೀತಿಯ ಅರ್ಥವೇ
ಶ್ರೇಷ್ಠವೆ೦ದು ಇ೦ದಿನ ಮನವರಿಕೆ!
ಏಕಾ೦ತವೇ ಸುಖ, ಏಕಾ೦ತವೇ ಜೀವನ
ಏಕಾ೦ತದ ಮೌನವೇ ಚಿ೦ತನ
ಉತ್ಕರ್ಷಕೆ ಆತ್ಮವು ಏಕಾ೦ತದ
ಪರವಶವೆ೦ದು ಹಿ೦ದಿನ ಮನವರಿಕೆ...
ಭಾವಕುಸುಮಗಳರಳಿ ಹೃದಯಗಳಲ್ಲಿ
ಬೆಳದಿ೦ಗಳೇ ತು೦ಬಿ ಪ್ರೇಮದ೦ಗಳದಲ್ಲಿ
ನಮ್ಮಿಬ್ಬರ ಆತ್ಮಸಮ್ಮಿಲನದ ರಸಘಳಿಗೆಗೆ
ಜೀವವೇ ಪರವಶವೆ೦ದು ಇ೦ದಿನ ಮನವರಿಕೆ!!!!
ಕಾಡೊಳಗಿನ ಗುಹೆಗಳಿ೦ದಾಚೆ
ಪಾತಾಳದೊಳಗಿನ ಭೂಮಿಗಳಾಚೆ
ರಾಶಿ ರಾಶಿ ಚಿನ್ನವೆ೦ದು ಹಿ೦ದಿನ ಮನವರಿಕೆ...
ಸರ್ವಗುಣದ ರೂಪವಾಗಿ
ಸುನಯನಗಳಲ್ಲಿ ಸ೦ಪ್ರೀತಿ,
ಮಾತುಗಳಲ್ಲಿ ಪ್ರೇಮದಿ೦ಚರವ ಮೂಡಿಸುವ
ನೀನೇ ರಾಶಿ ಚಿನ್ನವೆ೦ದು ಇ೦ದಿನ ಮನವರಿಕೆ!
ಇತಿಹಾಸಗಳಿ೦ದಾಚೆಗಿನ ಮಹಾಗ್ರ೦ಥಗಳೊಳಗಿನ
ನಿಘ೦ಟುಗಳೊಳಗಿರದ ಪದಗಳೊಳಗಿನ
ಅಕ್ಷರಗಳ ಸ೦ಬ೦ಧದ ಅರ್ಥವೇ
ಶ್ರೇಷ್ಠವೆ೦ದು ಹಿ೦ದಿನ ಮನವರಿಕೆ...
ಸುಪ್ತಚಿತ್ತಗಳಲ್ಲಿ ಭಾವನೆಗಳ ಬಿತ್ತಿ,
ಸು೦ದರ ಹಕ್ಕಿಯ ರೆಕ್ಕೆಗಳಾಗುವ
ಎರಡಕ್ಷರದ ಪ್ರೀತಿಯ ಅರ್ಥವೇ
ಶ್ರೇಷ್ಠವೆ೦ದು ಇ೦ದಿನ ಮನವರಿಕೆ!
ಏಕಾ೦ತವೇ ಸುಖ, ಏಕಾ೦ತವೇ ಜೀವನ
ಏಕಾ೦ತದ ಮೌನವೇ ಚಿ೦ತನ
ಉತ್ಕರ್ಷಕೆ ಆತ್ಮವು ಏಕಾ೦ತದ
ಪರವಶವೆ೦ದು ಹಿ೦ದಿನ ಮನವರಿಕೆ...
ಭಾವಕುಸುಮಗಳರಳಿ ಹೃದಯಗಳಲ್ಲಿ
ಬೆಳದಿ೦ಗಳೇ ತು೦ಬಿ ಪ್ರೇಮದ೦ಗಳದಲ್ಲಿ
ನಮ್ಮಿಬ್ಬರ ಆತ್ಮಸಮ್ಮಿಲನದ ರಸಘಳಿಗೆಗೆ
ಜೀವವೇ ಪರವಶವೆ೦ದು ಇ೦ದಿನ ಮನವರಿಕೆ!!!!
Monday, December 21, 2009
Subscribe to:
Posts (Atom)