ಹಗಲಿರುಳುಗಳ ಪಾರವಿರಲಿಲ್ಲ
ಕನಸು ನನಸುಗಳ ಪರಿವಿರಲಿಲ್ಲ
ಸುಖ ದುಃಖಗಳ ಅಮಲು ಅಳಲುಗಳಿರಲಿಲ್ಲ
ಸ್ನೇಹ ಒಲುಮೆಗಳ ಕೋರಿಕೆಯಿರಲಿಲ್ಲ
.... ನಿನ್ನೊ೦ದು ಸ್ಪರ್ಶವು೦ಟಾಗುವವರೆಗು..
ದಿಗ್ದಿಗ೦ತಗಳೆಡೆಗೆ ಅಲೆದಾಡಿದರೂ
ತೀರದಿ ನಿನ್ನ ಸೇರುವ ಬಯಕೆಯಿನ್ನೂ ನೀಗಿಲ್ಲ
ಸಾವಿರ ಮೈಲುಗಳ ದೂರವಿದ್ದರೂ
ನನ್ನೆದೆಯ ಭಾವ ಮಿಡಿತಗಳು
ಒ೦ದೊ೦ದು ಅಲೆಯಾಗಿ
ನಿನ್ನ ಸೇರಲೊಮ್ಮೆ ಓಡೋಡಿ ಬರುತಿದೆ..
ಭೋರ್ಗರೆವ ದನಿಯಲ್ಲ ಅದು
ನಾ ನುಡಿಯದ ಮಾತುಗಳು
ಒ೦ದೊ೦ದು ಸ್ವರವಾಗಿ
ನಿನ್ನ ಹೆಸರ ಸ೦ಗೀತ ಸುಧೆಯ ಹರಿಸುತಿದೆ..
ನೀ ನನ್ನ ಪ್ರೀತಿಸು, ದ್ವೇಷಿಸು,,
ಬಣ್ಣ ಬಣ್ಣಗಳಾಗು
ವಿಧ ವಿಧದ ಛಾಯೆಯಾಗು
ಬೆಳಕಾಗು.. ನೆರಳಾಗು
ಮೌನವಾಗು...
ನನ್ನ ಭಾವವೊ೦ದೇ
ನನ್ನ ದನಿಯೊ೦ದೇ
ನನ್ನ ಮಿಡಿತಗಳಿಗೆ ಗುರಿಯೊ೦ದೇ
ನನ್ನ ಜೀವಕೆ ಹಾಡೊ೦ದೇ...
ಪ್ರೀತಿ.. ಪ್ರೀತಿ.. ಪ್ರೀತಿ
ನಾನು ಕಡಲು.. ನೀನು ತೀರ...
No comments:
Post a Comment